WHO GMP ಪ್ರಮಾಣೀಕೃತ ಎಲ್ಲಾ ಔಷಧಿಗಳು 50% ರಿಂದ 80% ಕಡಿಮೆ ಬೆಲೆಗೆ ಲಭ್ಯ! || ಗುಣಮಟ್ಟ ಒಂದೇ – ವ್ಯತ್ಯಾಸ ಬೆಲೆಯಲ್ಲಿ ಮಾತ್ರ! ||
WHO GMP ಪ್ರಮಾಣೀಕೃತ ಎಲ್ಲಾ ಔಷಧಿಗಳು 50% ರಿಂದ 80% ಕಡಿಮೆ ಬೆಲೆಗೆ ಲಭ್ಯ! || ಗುಣಮಟ್ಟ ಒಂದೇ – ವ್ಯತ್ಯಾಸ ಬೆಲೆಯಲ್ಲಿ ಮಾತ್ರ! ||

ಜನ್ ಮನ್ ಜನರಿಕ್ ಔಷಧಿ - ಪುತ್ತೂರು

ಮಹಾವೀರ್ ಆಸ್ಪತ್ರೆ ಹತ್ತಿರ, ರಿಲಯನ್ಸ್ ಮಾರ್ಟ್ ಎದುರು, ಮೆಗಾ ಜೆನೆರಿಕ್ ಮೆಡಿಕಲ್ಸ್, ಮೆಗಾ ಸೆಂಟರ್, ಮುಖ್ಯರಸ್ತೆ, ಬೋಳ್ವಾರ್, ಪುತ್ತೂರು. 9035131385

 

ಜನ್ ಮನ್ ಉತ್ತರ - ನಿಮ್ಮ ಪ್ರಶ್ನೆಗಳಿಗೆ -

ಜನರಿಕ್ ಔಷಧಿಗಳ ಬಗ್ಗೆ ಯಾವುದೇ ಕುತೂಹಲ ಅಥವಾ ಪ್ರಶ್ನೆಗಳಿದ್ದರೆ, ನಮ್ಮ ತಜ್ಞರಿಗೆ ನೇರವಾಗಿ ಕರೆ ಮಾಡಿ ಅಥವಾ ಭೇಟಿಯಾಗಿ ಮಾತನಾಡಬಹುದು.

ಜನ್ ಮನ್ ತಜ್ಞರು / Experts

ಡಾ.ಲಾವಣ್ಯ - Pharm D
ಡಾ. ರೋಹಿತ್ ಶರ್ಮ - Pharm D
ಡಾ.ಸುಜಿತ್- Pharm D
ಡಾ. ಶಕ್ತಿ - Pharm D ಡಾ. ಅನ್ವಿತಾ ಕೃಷ್ಣ - Pharm D

📞 Appointment ಗಾಗಿ ಸಂಪರ್ಕಿಸಿ:

0 8251 452074 / +91  73376 37351 /  +91 9591165279

FAQ's

ಇಷ್ಟೊಂದು ಕಡಿಮೆ ಬೆಲೆಗೆ ಔಷಧಿಗಳು ದೊರೆಯಲು ಹೇಗೆ ಸಾಧ್ಯ?

ಜನ್ ಮನ್ ಔಷಧಿಗಳಿಗೆ ಬ್ರಾಂಡ್ ಹೆಸರು, ಜಾಹೀರಾತು ಮತ್ತು ಕಂಪನಿ ಪ್ರಚಾರದ ಖರ್ಚು ಇರುವುದಿಲ್ಲ. ಸರ್ಕಾರದ ಅನುಮೋದನೆ ಪಡೆದ ಉತ್ಪಾದನಾ ಘಟಕಗಳಲ್ಲಿ ನೇರವಾಗಿ ತಯಾರಾಗುತ್ತವೆ. ಆದ್ದರಿಂದ ಮಧ್ಯವರ್ತಿ ಖರ್ಚು ಕಡಿಮೆ – ಬೆಲೆ ಸಹ ಕಡಿಮೆ.

ಮೂಲ ಕಂಪನಿಯ ಪೇಟೆಂಟ್ ಅವಧಿ ಮುಗಿದ ನಂತರ ಅದೇ ರಾಸಾಯನಿಕ ಸಂಯೋಜನೆಯ (composition) ಔಷಧಿಯನ್ನು ಬೇರೆ ಕಂಪನಿಗಳು ತಯಾರಿಸಿದಾಗ ಅದನ್ನು ಜನರಿಕ್ ಔಷಧಿ ಎನ್ನುತ್ತಾರೆ. ಇದರ ಪರಿಣಾಮ ಮತ್ತು ಗುಣಮಟ್ಟ ಮೂಲ ಔಷಧಿಯಂತೆಯೇ ಇರುತ್ತದೆ.

ಸಂಪೂರ್ಣ ತಪ್ಪು ಕಲ್ಪನೆ. ಪ್ರತಿಯೊಂದು ಜನರಿಕ್ ಔಷಧಿಯೂ Drug Controller General of India (DCGI) ಮತ್ತು WHO-GMP ಪ್ರಮಾಣಿತ ಗುಣಮಟ್ಟ ಪರೀಕ್ಷೆ ಪಾಸಾಗಿರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ.

ಬ್ರಾಂಡೆಡ್ ಔಷಧಿಯಲ್ಲಿ ಕಂಪನಿಯ ಹೆಸರು ಇರುತ್ತದೆ; ಜನರಿಕ್ ಔಷಧಿಯಲ್ಲಿ ರಾಸಾಯನಿಕ ಸಂಯೋಜನೆಯ ಹೆಸರು ಇರುತ್ತದೆ. ಎರಡರಲ್ಲಿಯೂ “active ingredient” ಒಂದೇ ಇರುವುದರಿಂದ ಪರಿಣಾಮ ಕೂಡ ಒಂದೇ.

ವ್ಯತ್ಯಾಸ ಕೇವಲ ಬ್ರಾಂಡ್ ಹೆಸರು ಮತ್ತು ಪ್ಯಾಕಿಂಗ್ ನಲ್ಲಿ ಮಾತ್ರ. ಒಳಗಿನ ಸಂಯೋಜನೆ, ಪ್ರಮಾಣ ಮತ್ತು ಪರಿಣಾಮ ಒಂದೇ.

ಕೆಲವರು ಬ್ರಾಂಡ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ ಅಥವಾ ಜನರಿಕ್ ಬಗ್ಗೆ ಸಂಪೂರ್ಣ ಅರಿವು ಇಲ್ಲದಿರಬಹುದು. ಆದರೆ ಈಗ ಸರ್ಕಾರವೇ ಜನರಿಕ್ ಔಷಧಿ ಬಳಕೆಗಾಗಿ ವೈದ್ಯರನ್ನು ಪ್ರೋತ್ಸಾಹಿಸುತ್ತಿದೆ.

ವಿಭಿನ್ನ ಕಂಪನಿಗಳು ತಯಾರಿಸುವುದರಿಂದ ಬಾಹ್ಯ ರೂಪ ಬದಲಾಗುತ್ತದೆ. ಆದರೆ ಕ್ರಿಯಾಶೀಲ ಪದಾರ್ಥ ಒಂದೇ – ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಜನರಿಕ್ ಔಷಧಿ ಬಗ್ಗೆ ಪೂರ್ಣ ಮಾಹಿತಿ ಎಲ್ಲರಿಗೂ ತಲುಪಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳು, ಜನ್ ಮನ್ ಕೇಂದ್ರಗಳು, ಜನ ಔಷಧಿ ಕೇಂದ್ರಗಳು ಇವುಗಳಲ್ಲಿ ಬಳಸುವ ಎಲ್ಲ ಔಷಧಿಗಳೂ ಜನರಿಕ್. ಅದು ಗುಣಮಟ್ಟದ ನಿಖರ ಸಾಕ್ಷಿ.

ಬಹುತೇಕ ಸಂದರ್ಭಗಳಲ್ಲಿ ಅದು ಮಾನಸಿಕ ಭಾವನೆ. ಯಾವುದೇ ಔಷಧಿಯೂ ಕೆಲವರಿಗೆ ಅಲರ್ಜಿ ನೀಡಬಹುದು — ಇದು ಬ್ರಾಂಡೆಡ್‌ಗೂ ಸರಿ. ಔಷಧಿಯ ಮೂಲ ಸಂಯೋಜನೆ ಬದಲಾಗಿಲ್ಲದಿದ್ದರೆ ಭಯಪಡಬೇಕಾಗಿಲ್ಲ.

ಜನ್ಮನ್ ಜನರಿಕ್ ಔಷಧಿ ಕೇಂದ್ರಗಳಲ್ಲಿ ಪ್ರತಿಯೊಂದು ಔಷಧಿಯು ಸರ್ಕಾರದ ಗುಣಮಟ್ಟ ಪರೀಕ್ಷೆ ಪಾಸಾಗಿರುತ್ತದೆ. ಇಲ್ಲಿರುವ ಎಲ್ಲಾ ಔಷಧಿಗಳ ಮೇಲೆ ಸಂಪೂರ್ಣ ನಂಬಿಕೆಯನ್ನು ಇರಿಸಬಹುದು

ಇಲ್ಲ. “Active ingredient” ಒಂದೇ ಆಗಿರುವುದರಿಂದ ಪರಿಣಾಮದಲ್ಲಿ ವ್ಯತ್ಯಾಸ ಆಗುವುದಿಲ್ಲ. ಕೇವಲ ಪ್ಯಾಕಿಂಗ್ ಮತ್ತು ಕಂಪನಿ ಹೆಸರು ಮಾತ್ರ ಬದಲಾಗುತ್ತದೆ.

ಇಲ್ಲ. ಪರಿಣಾಮದ ಸಮಯವೂ, ಪರಿಣಾಮದ ಬಲವೂ ಒಂದೇ ಆಗಿರುತ್ತದೆ. ಏಕೆಂದರೆ ಸಂಯೋಜನೆ ಮತ್ತು ಪ್ರಮಾಣ

ನಿಮ್ಮ ವೈದ್ಯರು ಬರೆದಿರುವ ಔಷಧಿಯ composition name ಹೇಳಿ. ಜನರಿಕ್ ಔಷಧಿಯಲ್ಲಿ ಅದೇ ಸಂಯೋಜನೆಯು ಬೇರೆ ಕಂಪನಿಯ ಹೆಸರಿನಲ್ಲಿ ದೊರೆಯುತ್ತದೆ.

ಹೌದು. ಎಲ್ಲಾ ಔಷಧಿಗಳಿಗೂ ಭಾರತೀಯ ಔಷಧ ನಿಯಮಗಳ ಪ್ರಕಾರ ಅವಧಿ ನಿಗದಿಯಾಗಿದೆ – ಅದು ಕಂಪನಿ ಪ್ರಕಾರ ಬದಲಾಗುವುದಿಲ್ಲ

ಇಲ್ಲ. ಸಂಯೋಜನೆ ಒಂದೇ ಆಗಿರುವುದರಿಂದ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಯಾವುದೇ ಅನುಮಾನವಿಲ್ಲದೆ ತೆಗೆದುಕೊಳ್ಳಬಹುದು.

ಹೌದು. ಯಾವ ರೋಗಿಯಿಗೂ ಪ್ರತ್ಯೇಕ ಸಂಯೋಜನೆ ಇರುವುದಿಲ್ಲ. ಕೇವಲ ಪ್ರಮಾಣ ಮತ್ತು ಸಲಹೆ ಪಾಲಿಸಬೇಕು.

ವೈದ್ಯರಿಗೂ ಕೆಲವೊಮ್ಮೆ ಬ್ರಾಂಡೆಡ್ ಔಷಧಿಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೆ. ಆದರೆ ಜನರಿಕ್ ಔಷಧಿಯು ಬ್ರಾಂಡೆಡ್‌ ಔಷಧಿಗೆ ಸಮಾನವಾಗಿದೆ. ಕೇವಲ ಬೆಲೆಯಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ.

ಜನ್ಮನ್ ಜನರಿಕ್ ಔಷಧಿ ಕೇಂದ್ರಗಳು ಎಲ್ಲ ಕಡೆ ತೆರೆಯಲ್ಪಟ್ಟಿವೆ. ಅಲ್ಲಿ ಖರೀದಿಸಿದರೆ ನೂರು ಶೇಕಡಾ ನಂಬಿಕೆ.

ಭಾರತದಲ್ಲಿ ನೂರಾರು ಪ್ರಮಾಣಿತ ಕಂಪನಿಗಳು ಜನರಿಕ್ ಔಷಧಿ ತಯಾರಿಸುತ್ತಿವೆ – ಎಲ್ಲಾ ಸರ್ಕಾರದ ಪರವಾನಗಿ ಪಡೆದ ಕಂಪನಿಗಳೇ.

ಇಲ್ಲ. ಕಂಪನಿಯ ಪ್ರಕಾರ ಬಣ್ಣ ಮತ್ತು ಆಕಾರ ಬದಲಾಗಬಹುದು, ಆದರೆ ಸಂಯೋಜನೆ ಒಂದೇ. ಪ್ಯಾಕಿಂಗ್‌ನಲ್ಲಿ ಕಂಪನಿ ಹೆಸರು ಮತ್ತು ಬ್ಯಾಚ್ ನಂಬರ್ ಇರಬೇಕು.

ಸಾಮಾನ್ಯ ಔಷಧಿಯಂತೆ – ತಂಪಾದ, ಒಣ ಸ್ಥಳದಲ್ಲಿ, ನೇರ ಸೂರ್ಯಕಿರಣದಿಂದ ದೂರ ಇಡಿ. ಯಾವುದೂ ವಿಶೇಷ ವ್ಯವಸ್ಥೆ ಬೇಕಾಗಿಲ್ಲ.

ಇಲ್ಲ. ಬೆಲೆ ಕಡಿಮೆಯಾದದ್ದು ಮಾರುಕಟ್ಟೆ ಖರ್ಚು ಕಡಿಮೆ ಇರುವುದರಿಂದ. ಔಷಧಿಯ ಗುಣಮಟ್ಟ, ಪ್ರಮಾಣ, ಪರಿಣಾಮ – ಎಲ್ಲವೂ ಒಂದೇ.

ಪ್ರಚಾರ ನಿಧಾನವಾಗಿ ಹೆಚ್ಚುತ್ತಿದೆ. ಜನೌಷಧಿ ಯೋಜನೆಗಳ ಮೂಲಕ ಸರ್ಕಾರ ದೇಶದಾದ್ಯಂತ ಜನರಿಕ್ ಬಳಕೆಯನ್ನು ಉತ್ತೇಜಿಸುತ್ತಿದೆ.

ಹೌದು. ಒಂದೇ ತಿಂಗಳ ಔಷಧಿಗಳಲ್ಲಿ 50% ರಿಂದ 80% ವರೆಗೆ ಉಳಿತಾಯ ಸಾಧ್ಯ. ಅದು ನೇರವಾಗಿ ನಿಮ್ಮ ಕುಟುಂಬದ ಹಣವನ್ನು ಉಳಿಸುತ್ತದೆ.

ಪ್ಯಾಕಿಂಗ್‌ನಲ್ಲಿ ಕಂಪನಿ ಹೆಸರು, ಬ್ಯಾಚ್ ನಂಬರ್, ತಯಾರಿ ದಿನಾಂಕ ಮತ್ತು ಅವಧಿ ಸ್ಪಷ್ಟವಾಗಿರಬೇಕು. ಅಧಿಕೃತ ಕೇಂದ್ರದಿಂದ ಮಾತ್ರ ಖರೀದಿಸಿ.

A Unit of Sasipinjara
Pharmaceutical Pvt. Ltd

Contact information

Head Office

JANMAN Generic Aushadhi
#7, 3rd Main, Andrahalli, Vishwaneedam, Bangalore North, Bangalore 560 091, Karnataka

PUTTUR OFFICE

JANMAN Generic Aushadhi
1st Floor, Pinto Plaza, APMC ROAD, near Adarsha Hospital, Puttur, Karnataka 574201

© 2025. Janman Generic Puttur. All Rights Reserved.